Google Payments ಗೌಪ್ಯತಾ ಸೂಚನೆ

ಕೊನೆಯದಾಗಿ ಮಾರ್ಪಡಿಸಿರುವುದು 18 ನವೆಂಬರ್ 2024

ನೀವು Google ನ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಿದಾಗ ವೈಯಕ್ತಿಕ ಮಾಹಿತಿಯನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದನ್ನು Google ಗೌಪ್ಯತಾ ನೀತಿ ವಿವರಿಸುತ್ತದೆ. ಒಂದು ವೇಳೆ ನೀವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಾಗಿದ್ದರೆ Google ಹದಿಹರೆಯದವರ ಗೌಪ್ಯತಾ ಮಾರ್ಗದರ್ಶಿಯಲ್ಲಿ ನೀವು ಹೆಚ್ಚುವರಿ ಮಾಹಿತಿಯ ಮೂಲಗಳನ್ನು ಕಂಡುಕೊಳ್ಳಬಹುದು.

Google Payments ಅನ್ನು Google ಖಾತೆ ಹೊಂದಿರುವವರಿಗೆ ನೀಡಲಾಗುತ್ತದೆ ಮತ್ತು ಅದರ ನಿಮ್ಮ ಬಳಕೆಯು Google ಗೌಪ್ಯತಾ ನೀತಿಗೆ ಒಳಪಟ್ಟಿರುತ್ತದೆ. ಹೆಚ್ಚುವರಿಯಾಗಿ, ಈ ಗೌಪ್ಯತೆ ಸೂಚನೆಯು Google Payments ಗೆ ನಿರ್ದಿಷ್ಟವಾಗಿರುವ Google ಗೌಪ್ಯತೆ ರೂಢಿಗಳನ್ನು ವಿವರಿಸುತ್ತದೆ.

Google Payments ನ ನಿಮ್ಮ ಬಳಕೆಯು Google Payments ಸೇವಾ ನಿಯಮಗಳಿಂದ ನಿಯಂತ್ರಿಸಲ್ಪಡುತ್ತದೆ, ಅದು ಈ ಗೌಪ್ಯತೆ ಸೂಚನೆಯು ಒಳಗೊಳ್ಳುವ ಸೇವೆಗಳ ಬಗ್ಗೆ ಇನ್ನಷ್ಟು ವಿವರವಾಗಿ ತಿಳಿಸುತ್ತದೆ. ಈ ಗೌಪ್ಯತಾ ಸೂಚನೆಯಲ್ಲಿ ವ್ಯಾಖ್ಯಾನಿಸಲಾಗದಿರುವ ಇಂಗ್ಲಿಷ್‌ನ ದೊಡ್ಡಕ್ಷರಗಳಲ್ಲಿರುವ ಪದಗಳು Google Payments ಸೇವಾ ನಿಯಮಗಳಲ್ಲಿ ಅವುಗಳಿಗೆ ನೀಡಲಾಗಿರುವ ಅರ್ಥವನ್ನು ಹೊಂದಿರುತ್ತವೆ.

Google Payments ಗೌಪ್ಯತೆ ಸೂಚನೆಯು Google LLC ಅಥವಾ Google Payments Corp ಅನ್ನು ಒಳಗೊಂಡಂತೆ ಅದರ ಸಂಪೂರ್ಣ ಮಾಲೀಕತ್ವದ ಅಂಗಸಂಸ್ಥೆಗಳು ಒದಗಿಸುವ ಸೇವೆಗಳಿಗೆ ಅನ್ವಯಿಸುತ್ತದೆ. ('GPC'). ಯಾವ ಅಧೀನ ಸಂಸ್ಥೆಗಳು ಸೇವೆಯನ್ನು ಒದಗಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು ಸೇವೆಯ ಒಳಗಡೆ ನಿಮಗೆ ಲಭ್ಯವಿರುವ Google Payments ಸೇವಾ ನಿಯಮಗಳನ್ನು ಅವಲೋಕಿಸಿ.

ನಾವು ಸಂಗ್ರಹಿಸುವ ಮಾಹಿತಿ

Google ಗೌಪ್ಯತಾ ನೀತಿಯಲ್ಲಿ ಪಟ್ಟಿ ಮಾಡಲಾದ ಮಾಹಿತಿಗೆ ಹೆಚ್ಚುವರಿಯಾಗಿ, ಈ ಮುಂದಿನವುಗಳನ್ನು ಸಹ ಸಂಗ್ರಹಿಸಬಹುದು:

ನೋಂದಣಿಯ ಮಾಹಿತಿ

ನೀವು Google ಪಾವತಿಗಳ ಪ್ರೊಫೈಲ್‌ಗೆ ಸೈನ್‌ ಅಪ್ ಮಾಡಿದಾಗ, ನಿಮ್ಮ Google ಖಾತೆಯೊಂದಿಗೆ ಸಂಯೋಜಿತವಾದ Google Payments ಖಾತೆಯನ್ನು ನೀವು ರಚಿಸುತ್ತೀರಿ. ನೀವು ಬಳಸುವ Google Payments ಸೇವೆಗಳನ್ನು ಅವಲಂಬಿಸಿ, Google ಗೌಪ್ಯತಾ ನೀತಿಯಲ್ಲಿ ಪಟ್ಟಿ ಮಾಡಲಾದ ಮಾಹಿತಿಗೆ ಹೆಚ್ಚುವರಿಯಾಗಿ, ಈ ಕೆಳಗಿನ ಮಾಹಿತಿಯನ್ನು ಒದಗಿಸುವಂತೆ ನಿಮಗೆ ಹೇಳಬಹುದು:

ಕೆಲವು ಸಂದರ್ಭಗಳಲ್ಲಿ, ನಿಮ್ಮ ಮಾಹಿತಿಯನ್ನು ಅಥವಾ ಗುರುತನ್ನು ಪರಿಶೀಲಿಸಲು ಸಹಾಯವಾಗುವಂತೆ ನಮಗೆ ಹೆಚ್ಚುವರಿ ಮಾಹಿತಿಯನ್ನು ಕಳುಹಿಸುವಂತೆ ಅಥವಾ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರಿಸುವಂತೆ ನಾವು ನಿಮಗೆ ಹೇಳಬಹುದು. ಅಂತಿಮವಾಗಿ, ನೀವು ಕ್ಯಾರಿಯರ್ ಅಥವಾ ಆಪರೇಟರ್ ಬಿಲ್ಲಿಂಗ್ ಖಾತೆಯನ್ನು ನೋಂದಾಯಿಸಿದರೆ, ನಿಮ್ಮ ಕ್ಯಾರಿಯರ್ ಅಥವಾ ಆಪರೇಟರ್ ಖಾತೆಯ ಕುರಿತು ಕೆಲವು ಮಾಹಿತಿ ಒದಗಿಸುವಂತೆ ನಾವು ನಿಮಗೆ ಹೇಳುತ್ತೇವೆ.

ನಿಮ್ಮ ನೋಂದಣಿಯ ಮಾಹಿತಿಯನ್ನು ನಿಮ್ಮ Google ಖಾತೆಯ ಸಹಯೋಗದೊಂದಿಗೆ ಸಂಗ್ರಹಿಸಲಾಗುತ್ತದೆ ಮತ್ತು ಪಾವತಿ ವಿಧಾನದ ನಿಮ್ಮ ನೋಂದಣಿಯನ್ನು Googleನ ನ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಕೆಲವು ಪ್ರಕಾರಗಳು ಡೇಟಾವನ್ನು ನಿಮ್ಮ ಮೊಬೈಲ್ ಸಾಧನದಲ್ಲಿ ಸಹ ಸಂಗ್ರಹಿಸಬಹುದು.

ಥರ್ಡ್ ಪಾರ್ಟಿಗಳಿಂದ ಸ್ವೀಕರಿಸಿದ ಮಾಹಿತಿ

ಥರ್ಡ್ ಪಾರ್ಟಿ ದೃಢೀಕರಣ ಸೇವೆಗಳನ್ನೂ ಒಳಗೊಂಡಂತೆ, ಥರ್ಡ್ ಪಾರ್ಟಿಗಳಿಂದ ನಾವು ನಿಮ್ಮ ಕುರಿತು ಮಾಹಿತಿಯನ್ನು ಪಡೆದುಕೊಳ್ಳಬಹುದು. ಅದು ಇವುಗಳನ್ನು ಒಳಗೊಂಡಿರುತ್ತದೆ:

ಅಲ್ಲದೇ, ಮಾರಾಟಗಾರರಿಗೆ ಸಂಬಂಧಿಸಿದಂತೆ, ಕ್ರೆಡಿಟ್ ಬ್ಯೂರೋ ಅಥವಾ ವ್ಯವಹಾರ ಮಾಹಿತಿ ಸೇವೆಯೊಂದರಿಂದ ನಾವು ನಿಮ್ಮ ಬಗ್ಗೆ ಮತ್ತು ನಿಮ್ಮ ವ್ಯಾಪಾರದ ಬಗ್ಗೆ ಮಾಹಿತಿ ಪಡೆಯಬಹುದು.

ವಹಿವಾಟಿನ ಮಾಹಿತಿ

ನೀವು ವಹಿವಾಟೊಂದನ್ನು ನಡೆಸಲು Google Payments ಅನ್ನು ಬಳಸಿದಾಗ, ನಾವು ಆ ವಹಿವಾಟಿನ ಕುರಿತು ಮಾಹಿತಿಯನ್ನು ಸಂಗ್ರಹಿಸಬಹುದು, ಅವು ಈ ಕೆಳಗಿನವುಗಳನ್ನು ಒಳಗೊಂಡಿರಬಹುದು:

ನಾವು ಸಂಗ್ರಹಿಸುವ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ

Google ಗೌಪ್ಯತಾ ನೀತಿಯಲ್ಲಿ ಪಟ್ಟಿ ಮಾಡಲಾದ ಉದ್ದೇಶಗಳಿಗೆ ಹೆಚ್ಚುವರಿಯಾಗಿ, ನಮಗೆ, Google Payment Corp. (GPC) ಗೆ ಅಥವಾ ನಮ್ಮ ಇತರ ಅಧೀನ ಸಂಸ್ಥೆಗಳಿಗೆ ನೀವು ಒದಗಿಸುವ ಮಾಹಿತಿಯನ್ನು, ಜೊತೆಗೆ ಥರ್ಡ್ ಪಾರ್ಟಿಗಳಿಂದ ಪಡೆದ ನಿಮ್ಮ ಬಗೆಗಿನ ಮಾಹಿತಿಯನ್ನು ನಾವು ಈ ಕೆಳಗಿನ ಉದ್ದೇಶಗಳಿಗಾಗಿ ಬಳಸುತ್ತೇವೆ:

ನಿಮ್ಮ Google Payments ನ ಬಳಕೆಯ ಅವಧಿಯವರೆಗೆ ಮತ್ತು ನಮ್ಮ ಕಾನೂನು ಹಾಗೂ ನಿಯಂತ್ರಕ ಹೊಣೆಗಾರಿಕೆಗಳನ್ನು ಅನುಸರಿಸಲು ಅಗತ್ಯವಿರುವ ಹೆಚ್ಚುವರಿ ಅವಧಿಯವರೆಗೆ ನೀವು ಒದಗಿಸುವ ಮಾಹಿತಿಯನ್ನು ನಾವು ಇರಿಸಿಕೊಳ್ಳಬಹುದು.

ನಾವು ಹಂಚಿಕೊಳ್ಳುವ ಮಾಹಿತಿ

ಕೆಳಗಿನ ಸಂದರ್ಭಗಳಲ್ಲಿ ಮಾತ್ರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಾವು Google ಹೊರಗಿನ ಇತರ ಕಂಪನಿಗಳು ಅಥವಾ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತೇವೆ:

ಮಾಹಿತಿಯನ್ನು ಹಂಚಿಕೊಳ್ಳಬಹುದಾದ ಸಂದರ್ಭಗಳ ಉದಾಹರಣೆಗಳು:

ಥರ್ಡ್ ಪಾರ್ಟಿಗಳಿಂದ ಪಡೆದುಕೊಂಡ ಮಾಹಿತಿಯನ್ನೂ ಒಳಗೊಂಡಂತೆ ನಾವು ಸಂಗ್ರಹಿಸುವ ಮಾಹಿತಿಯನ್ನು ನಮ್ಮ ಅಫಿಲಿಯೇಟ್‌ಗಳೊಂದಿಗೆ ಹಂಚಿಕೊಳ್ಳುತ್ತೇವೆ, ಎಂದರೆ Google LLC ಮಾಲೀಕತ್ವದ ಹಾಗೂ ನಿಯಂತ್ರಣದಲ್ಲಿರುವ ಇತರ ಕಂಪನಿಗಳು ಎಂದರ್ಥ. ನಮ್ಮ ಅಫಿಲಿಯೇಟ್‌ಗಳು, ಅವು ಹಣಕಾಸು ಅಥವಾ ಹಣಕಾಸಿಗೆ ಸಂಬಂಧಿಸಿರದ ಘಟಕಗಳಾಗಿರಬಹುದು, ಗೌಪ್ಯತಾ ಸೂಚನೆ ಮತ್ತು Google ಗೌಪ್ಯತಾ ನೀತಿಯಲ್ಲಿ ಪ್ರಕಟಿಸಿರುವ ಉದ್ದೇಶಗಳಿಗಾಗಿ ಅಂತಹ ಮಾಹಿತಿಯನ್ನು ಬಳಸುತ್ತವೆ, ಇದರಲ್ಲಿ ಅವುಗಳ ಪ್ರತಿದಿನದ ವ್ಯಾಪಾರದ ಉದ್ದೇಶಗಳೂ ಸೇರಿವೆ.

ಅನ್ವಯವಾಗುವುದಾದರೆ GPC ಮತ್ತು ಅದರ ಅಫಿಲಿಯೇಟ್‌ಗಳ ನಡುವಿನ ಕೆಲವು ಹಂಚಿಕೊಳ್ಳುವಿಕೆಗಳಿಂದ ಹೊರಗುಳಿಯುವ ಹಕ್ಕನ್ನು ನಿಮಗೆ ನಾವು ನೀಡುತ್ತೇವೆ. ನಿರ್ದಿಷ್ಟವಾಗಿ, ನೀವು ಇದರಿಂದ ಹೊರಗುಳಿಯುವ ಆಯ್ಕೆಯನ್ನು ಮಾಡಬಹುದು:

ನೀವು ಯಾರ ಸೈಟ್ ಅಥವಾ ಆ್ಯಪ್‌ಗೆ ಭೇಟಿ ನೀಡುತ್ತೀರಿ, ವ್ಯಾಪಾರಿ ಸೈಟ್ ಅಥವಾ ಆ್ಯಪ್ ಮೂಲಕ ಪಾವತಿಸಲು ಬಳಸಬಹುದಾದ Google ಪಾವತಿಗಳ ಪ್ರೊಫೈಲ್ ಅನ್ನು ನೀವು ಹೊಂದಿದ್ದೀರೇ ಇಲ್ಲವೇ ಎಂಬುದನ್ನು Google LLC ಅಥವಾ ಅದರ ಅಫಿಲಿಯೇಟ್‌ಗಳು ಥರ್ಡ್ ಪಾರ್ಟಿಗೆ ತಿಳಿಸುವುದರಿಂದ ಹೊರಗುಳಿಯುವ ಆಯ್ಕೆಯನ್ನು ಸಹ ನೀವು ಮಾಡಬಹುದು.

ಒಂದು ವೇಳೆ ನೀವು ಹೊರಗುಳಿಯುವ ಆಯ್ಕೆಯನ್ನು ಮಾಡಿದರೆ, ನಿಮ್ಮ ಆಯ್ಕೆಯನ್ನು ಬದಲಾಯಿಸುವಂತೆ ನೀವು ನಮಗೆ ಹೇಳುವವರೆಗೂ ನಿಮ್ಮ ಆಯ್ಕೆಯು ಜಾರಿಯಲ್ಲಿರುತ್ತದೆ.

GPC ಮತ್ತು ಅದರ ಅಫಿಲಿಯೇಟ್‌ಗಳ ನಡುವೆ ನಿಮ್ಮ ಕ್ರೆಡಿಟ್ ಅರ್ಹತೆಯ ಕುರಿತಾದ ವೈಯಕ್ತಿಕ ಮಾಹಿತಿಯನ್ನು ನಾವು ಹಂಚಿಕೊಳ್ಳುವುದು ನಿಮಗೆ ಇಷ್ಟವಿರದಿದ್ದರೆ ಅಥವಾ ನಾವು ಸಂಗ್ರಹಿಸಿರುವ ಮತ್ತು ನಿಮಗೆ ಮಾರಾಟ ಮಾಡುವುದಕ್ಕಾಗಿ ನಮ್ಮ ಅಫಿಲಿಯೇಟ್‌ಗಳೊಂದಿಗೆ ಹಂಚಿಕೊಂಡಿರುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮ್ಮ ಅಫಿಲಿಯೇಟ್‌ಗಳು ಬಳಸುವುದು ನಿಮಗೆ ಇಷ್ಟವಿರದಿದ್ದರೆ ಅಥವಾ ನೀವು ಯಾವ ಸೈಟ್ ಅಥವಾ ಆ್ಯಪ್‌ಗೆ ಭೇಟಿ ನೀಡುತ್ತೀರಿ, ನೀವು Google ಪಾವತಿಗಳ ಪ್ರೊಫೈಲ್ ಹೊಂದಿದ್ದೀರಾ ಎಂಬುದರ ಕುರಿತು ಥರ್ಡ್ ಪಾರ್ಟಿ ವ್ಯಾಪಾರಿಯೊಬ್ಬರಿಗೆ Google LLC ಅಥವಾ ಅದರ ಅಫಿಲಿಯೇಟ್‌ಗಳು ಮಾಹಿತಿ ನೀಡುವುದು ನಿಮಗೆ ಇಷ್ಟವಿರದಿದ್ದರೆ, ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ Google Payments ಗೌಪ್ಯತೆ ಸೆಟ್ಟಿಂಗ್‌ಗಳಿಗೆ ಹೋಗಿ, ನಿಮ್ಮ ಆದ್ಯತೆಗಳನ್ನು ಅಪ್‌ಡೇಟ್ ಮಾಡುವ ಮೂಲಕ ನಿಮ್ಮ ಆದ್ಯತೆಯನ್ನು ಸೂಚಿಸಿ.

ಗೌಪ್ಯತೆ ಸೂಚನೆ ಅಥವಾ Google ಗೌಪ್ಯತಾ ನೀತಿಯಲ್ಲಿ ವಿವರಿಸಿರುವುದನ್ನು ಹೊರತುಪಡಿಸಿ, ನಿಮ್ಮ ವೈಯಕ್ತಿಕ ಮಾಹಿತಿಯನ್ನು GPC ಯ ಹೊರಗಿನ ಯಾರೊಂದಿಗೇ ಆಗಲಿ ಅಥವಾ ನಮ್ಮ ಅಫಿಲಿಯೇಟ್‌ಗಳೊಂದಿಗೇ ಆಗಲಿ ನಾವು ಹಂಚಿಕೊಳ್ಳುವುದಿಲ್ಲ. Google Payments ಎಂಬುದು Google ಖಾತೆ ಹೊಂದಿರುವವರಿಗೆ ಒದಗಿಸಲಾಗುವ ಒಂದು ಉತ್ಪನ್ನವಾಗಿದೆ. Google ಖಾತೆಗೆ ಸೈನ್‌ ಅಪ್‌ ಮಾಡುವ ಉದ್ದೇಶಕ್ಕಾಗಿ ನೀವು Google LLC ಗೆ ನೀಡುವ ಡೇಟಾದ ಮೇಲೆ ಈ ಗೌಪ್ಯತೆ ಸೂಚನೆಯಲ್ಲಿರುವ ಹೊರಗುಳಿಯುವ ಅವಕಾಶಗಳು ಪರಿಣಾಮ ಬೀರುವುದಿಲ್ಲ.

ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸುವುದು

ನಮ್ಮ ಭದ್ರತಾ ಅಭ್ಯಾಸಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಮುಖ್ಯ Google ಗೌಪ್ಯತಾ ನೀತಿಯನ್ನು ನೋಡಿ.

ನಿಮ್ಮ Google ಪಾವತಿಗಳ ಪ್ರೊಫೈಲ್‌ನ ಸುರಕ್ಷತೆಯು ನೀವು ಈ ಸೇವೆಗಾಗಿ ನಿಮ್ಮ ಖಾತೆಯ ಪಾಸ್‌ವರ್ಡ್(ಗಳು), ಪಿನ್‌ಗಳು ಮತ್ತು ಇತರ ಆ್ಯಕ್ಸೆಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಎಷ್ಟು ಗೌಪ್ಯವಾಗಿ ಇರಿಸುತ್ತೀರಿ ಎಂಬುದನ್ನು ಅವಲಂಬಿಸಿದೆ:

ಥರ್ಡ್ ಪಾರ್ಟಿ ವ್ಯಾಪಾರಿ, ವೆಬ್‌ಸೈಟ್ ಅಥವಾ ಆ್ಯಪ್‌ಗೆ ನೀವು ನೀಡುವ ಯಾವುದೇ ಮಾಹಿತಿಯನ್ನು ಈ ಗೌಪ್ಯತೆ ಸೂಚನೆಯು ಒಳಗೊಳ್ಳುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೇರವಾಗಿ ಹಂಚಿಕೊಳ್ಳಲು ನೀವು ಆಯ್ಕೆ ಮಾಡುವ ವ್ಯಾಪಾರಿಗಳು ಅಥವಾ ಇತರ ಥರ್ಡ್ ಪಾರ್ಟಿಗಳ ಗೌಪ್ಯತೆ ಅಥವಾ ಸುರಕ್ಷತಾ ವಿಧಾನಗಳಿಗೆ ನಾವು ಜವಾಬ್ದಾರರಾಗಿರುವುದಿಲ್ಲ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೇರವಾಗಿ ಹಂಚಿಕೊಳ್ಳಲು ನೀವು ಆಯ್ಕೆ ಮಾಡುವ ಯಾವುದೇ ಥರ್ಡ್ ಪಾರ್ಟಿಯ ಗೌಪ್ಯತೆ ನೀತಿಗಳನ್ನು ಪರಿಶೀಲಿಸಲು ನಾವು ನಿಮಗೆ ಉತ್ತೇಜಿಸುತ್ತೇವೆ.

© 2024 Google – Google Home Google ಸೇವಾ ನಿಯಮಗಳು ಹಿಂದಿನ ಗೌಪ್ಯತೆ ಸೂಚನೆಗಳು